Tuesday, March 8, 2011

ಬಂತ ಹೀಗೊಂದು ಭಾವನೆ:

ಗದ್ದೆಯಲ್ಲಿ ನಡೆಯುವಾಗ
ಕಬ್ಬಿನ ಗಿಡವೊಂದು ಹೇಳಿತು -
ನಾನು ಕುದ್ದು ಬೆಲ್ಲ ಸಕ್ಕರೆ ಕೊಡುವೆ,
ಹರಸಿಬಂದೆ ಹಾಯಾಗಿರೆಂದು ನೂರುವರುಷ.
ಮರುದಿನ ಹೋಗಿನೋಡುವಷ್ಟರಲ್ಲಿ
ರೈತನೊಬ್ಬ ಕಡಿದೊಯ್ದಿದ್ದ, ಇಡಿ ಹೊಲ ಬರಡಾಗಿತ್ತು
ಅವನಿಗೆ ಸಕ್ಕರೆಯಗೊಡವೆ
ಮುದುರಿದ ಮನದಲೊಂದು ಮೂಡಿತೊಂದು ಕರಿಯ ಛಾಯೆ
ಹರಕೆಗೊಂದು ಗಿಡವು ಹರಿದುಹೋಯಿತೆಂದು
ಬಂತ ಹೀಗೊಂದು ಭಾವನೆ.

ಒದ್ದೆ ಕನಸಿನಲ್ಲಿ ಹಾಡುವಾಗ
ಕೇಳಿತೊಂದು ಕೋಗಿಲೆ
ನನ್ನ ನಾದದಲೆಯಲ್ಲಿ ತೇಲದವರಾರಿಲ್ಲ?
ಥಟ್ಟನೆ ನೆನಪಾದ ಪೇಲವ ಮುಖದ
ನೆರೆಮನೆಯ ಅಮಲಿನಲ್ಲಿ ತೇಲುವವ
ಎಚ್ಚರಗೊಂಡವನಲ್ಲಿ ಮೂಡಿತೊಂದು ಮಾಯೆ
ಪ್ರಕೃತಿ ಮರೆಸುವ ವಿಕೃತಿಯಿದೆ ಎಂಬ
ಬಂತ ಹೀಗೊಂದು ಭಾವನೆ.

ಮುದ್ದು ಮುಖದ ಬಾಲಕನ ನೋಡಿ
ಗೆಳೆಯರ ಕೂಡಿ,ಆಡಿ ನಲಿದ ದಿನಗಳ
ನೆನಪಾಗಲು ಮುಗುಳ್ನಗೆ ಸುಳಿದು,
ನನ್ನ ಬಾಲ್ಯ ಎಲ್ಲಿ ಹೋದೆ? ಅನ್ನುತಿರಲು
ಮರಳಿ ಬರದ ನಿನ್ನ ಬಾಲ್ಯವ ಬೇರೆಯವರಲ್ಲಿ ಕಾಣೆಂಬ
ಬಂತ ಹೀಗೊಂದು ಭಾವನೆ.

1 comment: