Friday, March 29, 2013

ಲಘು ಗುರು ಹಾಕುವ ವಿಧಾನ:


ಲಘು ಗುರು ಹಾಕುವ ವಿಧಾನ:

ಲಘು: ಒಂದು ಮಾತ್ರೆಯಲ್ಲಿ ಹೇಳಬಹುದಾದ ಹೃಸ್ವಸ್ವರಗಳಿಗೆ ಲಘು(U) ಬಳಸಬೇಕು.
ಗುರು: ಎರಡು ಮಾತ್ರೆಗಳಲ್ಲಿ ಉಚ್ಛರಿಸುವ ಸ್ವರಗಳಿಗೆ, ಅನುಸ್ವರ ಹಾಗೂ ವಿಸರ್ಗಗಳಿಗೆ ಗುರು(-) ಹಾಕಬೇಕು.ಒತ್ತಕ್ಷರದ ಹಿಂದಿನ ಅಕ್ಷರಕ್ಕೆ, ವ್ಯಂಜನದ ಹಿಂದಿನ ಅಕ್ಷರದಿಂದ ಹಿಡಿದು ವ್ಯಂಜನಾಕ್ಷರದವರೆಗೆ ಒಂದೇ ಗುರು ಹಾಕಬೇಕು.

ಅಕ್ಷರ ಗಣಗಳು:
ಪ್ರತಿ ಮೂರು ಅಕ್ಷರಗಳನ್ನು ಗುಂಪುಮಾಡಿ ಲಘು ಗುರು ಹಾಕಿದಾಗ ಉಂಟಾಗುವ ಲಕ್ಷಣ (ಪ್ಯಾಟರ್ನ್).
ಕನ್ನಡದಲ್ಲಿ ಒಟ್ಟು ೮ ಅಕ್ಷರಗಣಗಳಿವೆ.
೧. ಗುರು ಮೂರಿರೆ ಬರಲು ’ಮ’ ಗಣ  (---)
೨. ಲಘು ಮೂರಿರೆ ಬರಲು ’ನ’ ಗಣ  (UUU)
೩. ಗುರು ಮೊದಲಿಗೆ ಬರಲು ’ಬ’ ಗಣ  (-UU)
೪. ಲಘು ಮೊದಲಿಗೆ ಬರಲು ’ಯ’ ಗಣ (U --)
೫. ಗುರು ನಡುವಿರೆ ಬರಲು ’ಜ’ ಗಣ (U-U)
೬. ಲಘು ನಡುವಿರೆ ಬರಲು ’ರ’ ಗಣ (-U-)
೭. ಗುರು ಕಡೆಯಲ್ಲಿ ಬರಲು ’ಸ’ ಗಣ (UU-)
೮. ಲಘು ಕಡೆಯಲ್ಲಿ ಬರಲು ’ತ’ ಗಣ (--U) .

ಯಮಾತಾರಾಜಬಾನಸಲಗಂ : ಇದರಲ್ಲಿ ಪ್ರತಿ ಮೂರು ಅಕ್ಷರಗಳನ್ನು ತೆಗೆದುಕೊಂಡು ಮಾತ್ರೆ ಹಾಕಿದರೆ ಕ್ರಮವಾಗಿ ಯ,ಮ,ತ,ರ,ಜ,ಬ,ನ,ಸ ಎಂದು ೮ ಗಣಗಳು ಮತ್ತು ಕೊನೆಯಲ್ಲಿ ಲಘು ಮತ್ತು ಗುರು ಇದೆ.
 U   -    -   -  U -  U U U -
 ಯಮಾತಾರಾಜಬಾನಸಲಗಂ

No comments:

Post a Comment